ಚಟುವಟಿಕೆ 9:ನಮ್ಮ ವೃತ್ತಿ ನೈಪುಣ್ಯತೆಯನ್ನು ಕುರಿತ ಲೇಖನ
ಸದರಿ ಮನೆಯಿಂದ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಕುರಿತಂತೆ 400 ಪದಗಳ ಲೇಖನ.
ಇಂದಿನ ಕಾಲದಲ್ಲಿ ಆರೋಗ್ಯ ಮತ್ತು ವಿದ್ಯೆಯನ್ನು
ಒಂದೇ ತಕ್ಕಡಿಯಲ್ಲಿ ಹಾಕಿ ತೂಗಿದರೆ ಆರೋಗ್ಯ ತೂಕ ಪಡೆದರೂ
ಕೂಡ ಶಿಕ್ಷಣ ಅಥವಾ ವಿದ್ಯೆಯು ತಿನ್ನು ಕಡಿಮೆಯಿಲ್ಲವೆಂತೆ ತನ್ನದೇ
ಆದ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.ಈಗಿನ ದಿನಗಳಲ್ಲಿ
ಮಕ್ಕಳಿಗೆ ಎರಡೂ ಮುಖ್ಯ,ಒಂದು ಜೀವಿಸಲು ಮುಖಯವಾದರೆ
ಇನ್ನೊಂದು ಜೀವನ ರೂಪಿಸಿಕೊಳ್ಳಲು ಮುಖ್ಯವಾಗಿದೆ.
ಸೇನೆಯ ಪ್ರತಿರೂಪ ಶಿಕ್ಷಣ
ತಪ್ಪಿದ್ದರೆ ಕಠೋರದಿ ಪರೀಕ್ಷಿಸುವ
ತಿದ್ದಿ ನೋಡಿದಾಗ ಬೆನ್ನು ತಟ್ಟಿರುವ
ಕಲ್ಮಷ ಇಲ್ಲ ಅವರ ಮನಲ್ಲಿ
ಮಕ್ಕಳ ಬಾಳು ಬೆಳೆಸವ
ಗುರಿ ಒಂದೇ ಅವರಲ್ಲಿ....
ಶಿಕ್ಷಕ ಯಾವಾಗಲೂ ಸಮಾಜವನ್ನು ತಿದ್ದುವ,ದೇಶವನ್ನು
ಕಟ್ಟುವ ನಿಮ್ರಾತೃ. ಇಂತಹ ಶಿಕ್ಷಕನ ಕಲಿಕೆಯ ಕ್ಷಣಿಕವಾಗಿ ನಿಂತರೆ
ಮುಂದಿನ ಪರಿಸ್ಥಿತಿಯನ್ನು ಊಹಿಸಲು ಸಹ ಸಾಧ್ಯವಿಲ್ಲ.ಹಾಗಾಗಿ
"ಒಬ್ಬ ಉತ್ತಮ ಶಿಕ್ಷಕ ಯಾವಾಗಲೂ ವಿದ್ಯಾರ್ಥಿಯಾಗಿರುತ್ತಾನೆ".
ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳು ಹೊಸದೇನಲ್ಲ.ಕಲಿ
-ಕೆಯಲ್ಲಿ ತೀವ್ರಗತಿಯಲ್ಲಿರುತ್ತದೆ ಬದಲಾವಣೆ ತರುವ ಮೂಲಕ
ಸರಕಾರ ಪ್ರಯತ್ನ ಮಾಡುತ್ತಲೇ ಇದೆ.ಇದರಿಂದಾಗಿ ಶಿಕ್ಷಕರು ತಂತ್ರ
-ಜ್ಞಾನ ಬಳಸಿ ವಿದ್ಯಾರ್ಥಿಗಳನ್ನು ಶಾಲೆಯ ಕಡೆಗೆ ಆಕರ್ಷಣೆಗೊಳಿ
ಸಿಗದೆ.ಇದನ್ನು ಬಳಸಿಕೊಂಡು ಶೈಕ್ಷಣಿಕ ಯೋಜನೆಗಳು ಸಫಲಗೊ
-ಳ್ಳುವಂತೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ.
"ಭಾರತದ ಭವಿಷ್ಯವು ಶಾಲಾ ಕೊಠಡಿಗಳಲ್ಲಿ ನಿರ್ಮಾಣ
-ವಾಗುತ್ತಿದೆ" ಎಂಬ ಮಾತಿದೆ.ಈ ಕರುನಾಡ ಸಮಸ್ಯೆಯ ಸಂದರ್ಭ
-ದಲ್ಲಿ ಶಾಲೆ ತೆರೆಯುವುದು,ನಿರ್ವಹಿಸುವುದು,ಜಾಗತಿಕ ಸಮಸ್ಯೆಗ
ಳಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಆದ್ದರಿಂದ ಶಿಕ್ಷಕರು ಮನೆಯಿಂದ ಶಾಲಾ ಕರ್ತವ್ಯ ನಿರ್ವಹಿಸುತ್ತಾ ಮಕ್ಕಳ ಕಲಿ
ಕಥೆಯಲ್ಲಿ ಉತ್ಕೃಷ್ಟ ಬದಲಾವಣೆ ತರಲು ಪರಿಶ್ರಮಿಸಬೇಕಾಗಿದೆ.
ಶಿಕ್ಷಕರು ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಈ ಕೆಳಗಿನ ಕ್ರಮಗಳ
ನ್ನು ಅನುಸರಿಸುವುದು ಅನಿವಾರ್ಯವಾಗಿದೆ.
1.ಧನಾತ್ಮಕ ಚಿಂತನೆ ಬೆಳೆಸಿಕೊಳ್ಳುವುದು:ಸಕಾರಾತ್ಮಕ ಚಿಂತನೆ
-ಯು ತನಗೆ ಎದುರಾಗುವ ಘಟನೆ,ಸಂದರ್ಭ,ಸನ್ನಿವೇಶಗಳನ್ನು
ಪರಾಮರ್ಶಿಸಿಕೊಂಡು ಸಮಾಜಕ್ಕೆ ಒಳ್ಳೆಯದಾಗುವಂತೆ ಚಿಂತನೆ
ಮಾಡ್ಬಕಾಗಿದೆ.
2.ಸ್ವ ಅರಿವು:ನಮ್ಮ ಸಾಮರ್ಥ್ಯಗಳು,ನಂಬಿಕೆಗಳು,ದೃಷ್ಟಿಕೋನ
ದೌರ್ಬಲ್ಯಗಳ ಅರಿವು ನಮಗೆ ಸ್ಪಷ್ಟವಾಗಿದ್ದಾಗ ಮಾತ್ರ ಯಶಸ್ಸು
ಗಳಿಸಲು ಸಾಧ್ಯವಾಗುತ್ತದೆ.
3.ತಂತ್ರಜ್ಞಾನ ಆಧಾರಿತ ಕಲಿಕೆಗೆ ಒತ್ತು ನೀಡುವುದು: ಮಕ್ಕಳ
ಜ್ಞಾನವನ್ನು ಹೆಚ್ಚು ಮಾಡುವಲ್ಲಿ ತಂತ್ರಜ್ಞಾನವನ್ನು ಸಮಗ್ರವಾಗಿ
ಅರ್ಥ ಮಾಡಿಕೊಂಡಾಗ ಕಲಿಕೆಯನ್ನು ಸರಿಯಾಗಿ ಅನುಕೂಲಿಸ
-ಬಲ್ಲವನಾಗುತ್ತಾನೆ.
4.ಸಮಯ ನಿರ್ವಹಣೆ:ಸಮಯದ ಸದುಪಯೋಗ ಮತ್ತು ನಿರ್ವ
-ಹಣೆ ಅತೀ ಮುಖ್ಯವಾದುವು.ಈ ಕೌಶಲ ಅರಿವಿದ್ದವರು ಖಂಡಿತ
ಒತ್ತಡಕ್ಕೆ ಒಳಗಾಗಿದ್ದ ವೃತ್ತಿ ನೈಪುಣ್ಯತೆಯನ್ನು ಸಫಲಗೊಳಿಸಿಕೊ
ಳ್ಳುವರು.
5.ದೂರದರ್ಶನ ವೀಕ್ಷಣೆ: ದೂರದರ್ಶನದಲ್ಲಿ ಪ್ರಸಾರವಾಗುವ
ಕಲಿಕೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ವೀಕ್ಷಿಸಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬಹುದು.
6.ಆನ್ಲೈನ್ ಅಥವಾ ಯೂ ಟ್ಯೂಬ್ ಶೈಕ್ಷಣಿಕ ಕಾರ್ಯಕ್ರಮಗಳ
-ನ್ನು ವೀಕ್ಷಿಸುವುದು: ಯೂ ಟ್ಯೂಬ್,ದೀಕ್ಷಾ ಆಯಪ್ ಮುಂತಾ
-ದ ಆನ್ಲೈನ್ನಲ್ಲಿ ಲಭ್ಯವಿರುವ ಹಲವಾರು ವಿಷಯಗಳಿಗೆ ಸಂಬಂಧಿ -ಸಿದ ಕಾರ್ಯಕ್ರಮ ವೀಕ್ಷಿಸಬಹುದು.
7.ಆಕರ ಗ್ರಂಥಗಳನ್ನು ಓದುವುದು:ಪಠ್ಯ ವಿಷಯಕ್ಕೆ ಸಂಬಂಧಿಸಿ -ದಂತೆ ಹೆಚ್ಚಿನ ಜ್ಞಾನವನ್ನು ತಿಳಿಯಲು ಪೂರಕ ಅಥವಾ ಆಕರ
ಗ್ರಂಥಗಳನ್ನು ಓದುವುದರಿಂದ ಶಿಕ್ಷಕರ ಜ್ಞಾನ ವೃದ್ಧಿಯಾಗುತ್ತದೆ.
8.ಮಕ್ಕಳೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು:ಮನೆಯಲ್ಲಿ
ಇದ್ದು ಮಕ್ಕಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅವರು
ಅಭ್ಯಾಸ ಮಾಡುವಂತೆ ಮನವೊಲಿಸುವುದು.
9.ಕಲಿಕೋಪಕರಣಗಳನ್ನು ತಯಾರಿಸಿಕೊಳ್ಳುವುದು.
10.ಬೋಧನಾ ತಂತ್ರಗಳ ಸುಧಾರಣೆ ಮಾಡಿಕೊಳ್ಳುವುದು.
11.ನಮ್ಮ ಶಾಲೆ ಉತ್ತಮವಾದ ಶಾಲೆಯಾಗಬೇಕೆಂಬ ಗುರಿಯೊಂ
-ದಿಗೆ ಅಗತ್ಯ ಯೋಜನೆಗಳನ್ನು ರೂಢಿಸಿಕೊಳ್ಳಬೇಕು.
ಹೀಗೆ ಹತ್ತಾರು ಚಟುವಟಿಕೆಗಳನ್ನು ಶಿಕ್ಷಕ
ಕೈಗೊಳ್ಳುವುದು ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕ ಸಕ್ರಿಯರಾಗಿ
ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು.ಮತ್ತು ವೃತ್ತಿ ನೈಪುಣ್ಯತೆ
ಹೊಂದಲು ಗುಣಾತ್ಮಕ ,ಸಕಾರಾತ್ಮ ಚಿಂತನೆಯನ್ನು ಶಿಕ್ಷಕ ಬೆಳೆಸಿ
-ಕೊಳ್ಳಬೇಕು.ಶಿಕ್ಷಕರು ತಮ್ಮ ಕೆಲಸಗಳನ್ನು ಕೇವಲ ಒಂದು- ಉದ್ಯೋಗವೆಂದು ಪರಿಗಣಿಸದೆ ಕರ್ತವ್ಯವೆಂದು ಭಾವಿಸಿ ವೃತ್ತಿ
-ಶರಣಾಗಬೇಕು.
.
.
Comments
Post a Comment