ಚಟುವಟಿಕೆ 10:ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ
ಕೋವಿಡ್-19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ ನಮ್ಮ ಸಲಹೆ ಮತ್ತು ಕಾರ್ಯತಂತ್ರಗಳ ಪಟ್ಟಿ.
ಅಯ್ಯೋ! ದೇವರೇ ಮುಟ್ಟಂಗಿಲ್ಲ,ಕೆಮ್ಮಂಗಿಲ್ಲ,
ಹತ್ ಹತ್ರ ಕೂಡಂಗಿಲ್ಲ,ಇನ್ನು ಮನೆ ಬಾಳೆವೂ ಹೆಂಗೊ?ಅಯ್ಯೊ!
ಇನ್ನು ಈ ಸಮಯದಲ್ಲಿ ಮಕ್ಕಳ ಶಾಲೆ ಕಲಿಕೆ ಇನ್ನಿತರ ಕಾರ್ಯಗಳ
-ನ್ನು ಮಾಡುವುದು ಹೇಗೆ?ಎಂಬಿತ್ಯಾದಿ ಯೋಚನೆಗಳು ಒಂದು
ಕಡೆಯಾದರೆ ಕೊರೊನಾದೊಂದಿಗೆ ಹೊಂದಿಕೊಂಡೆ ನಮ್ಮ ಕೆಲಸ
ಕಾರ್ಯಗಳನ್ನು ನಿರ್ವಹಿಸಬೇಕಾದ ಅನಿವಾರ್ಯ ಸಂದರ್ಭವೊಂ
-ದು ಒದಗಿ ಬಂದಿದೆ.ಹಾಗೂ ಅದನ್ನುಸಮರ್ಥವಾಗಿಎದುರಿಸಲೂ
ಬೇಕಾಗಿದೆ. ಅಲ್ಲದೆ ಈ ಸಂದರ್ಭದಲ್ಲಿ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ
ಮಾಡಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ.
ಸ್ತಬ್ಧವಾದ ಶಿಕ್ಷಣಕ್ಷೇತ್ರವನ್ನು ಮರು ಪ್ರಾರಂಭಿಸು -ವಾಗ ಬದಲಾವಣೆ ತರುವುದು ಸುಲಭ.ಮೆಕಾಲೆ ಪದ್ಧತಿದೇಶದಲ್ಲಿ
ಇರುವಷ್ಟು ದಿನವೂ ಕೂಲಿಕಾರರು ಹುಟ್ಟಿಕೊಳ್ಳುತ್ತಾರೆಯೇ ಹೊರತು, ಕೂಲಿ ಕೊಡುವ ಮಾಲಿಕರಲ್ಲ. ಶಿಕ್ಷಕ ಕೇವಲ ಶಿಕ್ಷಕನಾ
-ಆಗಿರದೇ ಗುರುವಿನ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ಮಾಡಿ
-ದಲ್ಲಿ ಯಶಸ್ಸು ಸಾಧ್ಯ. ಕೊರೊನಾ ದೇಶದಲ್ಲಿ ಶಿಕ್ಷಣ ಪದ್ಧತಿಯ
ಮುಖವಾಡ ಕಳಚಿ ಸಾಮಾನ್ಯರ ಮುಂದೆ ತೆರೆದಿಟ್ಟಿದೆ.ಕಳಚಿದ ಮುಖವಾಡ ಕಿತ್ತೆಸೆದು ಸುಂದರ ವದನಕ್ಕೆ ಮುದ್ದಿನ ಅಲಂಕಾರ
ಮಾಡುವುದು ಶಿಕ್ಷಕರ ಕೈಯಲ್ಲಿದೆ.
ಇಂತಹ ವಿಷಮ ಗಳಿಗೆಯಲ್ಲಿ ಮಕ್ಕಳನ್ನು ಸಕ್ರಿಯ
ವಾಗಿದೆ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು
ಈ ಕೆಳಗಿನಂತೆ ಕ್ರಮ ವಹಿಸಬಹುದಾಗಿದೆ.
1.ವಠಾರ ಶಾಲಾ ಕಾರ್ಯಕ್ರಮ:ಪೋಷಕರ ಮನವೊಲಿಸಿ ಮನ
-ವೊಲಿಸಿ ವಠಾರ ಶಾಲೆಗೆ ಮಕ್ಕಳಿಗೆ ಕಲಿಯುವಂತೆ ಪ್ರೇರೇಪಿಸ
-ಬೇಕು.
2.ಹಿರಿಯ ವಿದ್ಯಾರ್ಥಿಗಳಿಗೆ ದಿನಕ್ಕೆ ಕನಿಷ್ಠ ಸಮಯ ಆನ್ಲೈನ್
ತರಗತಿ ಮೂಲಕ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡು
-ವುದು.
3.ಶಾಲಾ ಶಿಕ್ಷಕರು ಮಕ್ಕಳನ್ನು ದೂರವಾಣಿ ಮೂಲಕ ಸಂಪರ್ಕಿಸಿ
ಕಲಿಕೆಗೆ ತಮ್ಮನ್ನು ಹೇಗೆ ತೊಡಗಿಕೊಳ್ಳಬೇಕೆಂಬ ಮಾರ್ಗದರ್ಶನ
ನೀಡುವುದು.
4.ಮಕ್ಕಳ ಆತ್ಮ ಸ್ಥೈರ್ಯ ಹೆಚ್ಚಿಸುವುದು. ಇದರಿಂದ ಕಲಿಕೆಗೆ
ಪೂರಕ ವಾತಾವರಣ ಬೆಳೆಯುವುದು.
5.ಟ್ಯಾಬ್ , ಲ್ಯಾಪ್ಟಾಪ್,ದೂರದರ್ಶನ ಮುಂತಾದ ತಂತ್ರಜ್ಞಾನ
ವಸ್ತುವನ್ನು ಕಲಿಕೆಗೆ ಬಳಸಿಕೊಳ್ಳುವಂತೆ ಪ್ರೇರೇಪಿಸುವುದು.
6.ಚಿತ್ರಪಟ,ಆಡಿಯೋ,ವಿಡಿಯೋ ಮೂಲಕ ಕಡಿಮೆ ಸಮಯ
-ದಲ್ಲಿ ಪರಿಣಾಮಕಾರಿ ಕಲಿಕೆಗೆ ಒತ್ತು ನೀಡುವುದು.
7.ಮಕ್ಕಳನ್ನು ಹೆಚ್ಚು ಹೆಚ್ಚು ಸೃಜನಾತ್ಮಕ ಚಟುವಟಿಕೆಗಳಲ್ಲಿ
ಪಾಲ್ಗೊಳ್ಳುವಂತೆ ಮಾಡುವುದು.
8.ಸರಳ ಭಾಷೆಯ ಶೈಕ್ಷಣಿಕ ವಿಡಿಯೋಗಳನ್ನು ಮಕ್ಕಳು ನೋಡು
-ವಂತೆ ಹೇಳಿ ಕಲಿಕೆಯಲ್ಲಿ ಪಾಲ್ಗೊಳ್ಳುನಂತೆ ಮಾಡುವುದು.
9.ದೈಹಿಕ ಅಂತರ ಮಾಸ್ಕ್ ಧರಿಸುವುದರಿಂದ ಆಗುವ ಲಾಭಗಳು
ಇತ್ಯಾದಿಗಳ ಬಗ್ಗೆ ಶಿಕ್ಷಣದ ಒಂದು ಭಾಗವಾಗಿ ಶಿಕ್ಷಣ ಪ್ರಕ್ರಿಯೆ
-ಯಲ್ಲಿ ಪಾಲ್ಗೊಳ್ಳುವುದು.
ಒಟ್ಟಾರೆಯಾಗಿ ಒಂದು ಕೊರೊನಾದಿಂದಾಗಿ
ಪೋಷಕರ,ಮಕ್ಕಳು,ಶಿಕ್ಷಕರು,ಇಲಾಖೆ ತೊಂದರೆ ಅನುಭವಿಸುವಂ
-ತಾಗಿದೆ.ಕೊರೊನಾ ಸಂಪೂರ್ಣ ನಾಶವಾಗಬಲ್ಲ ಆದರೆ ಅದರ
ಚಟುವಟಿಕೆ ಸದಾ ಇದ್ದೇ ಇರುತ್ತದೆ. ಆದ್ದರಿಂದ ದೈಹಿಕ ಅಂತರ-
ದೊಂದಿಗೆ ಬದುಕುವುದು,ಶೈಕ್ಷಣಿಕ ಕಾರ್ಯ ಮಾಡುವುದು ಅನಿ-
ವಾಗಿದೆ.
Comments
Post a Comment